Skip to main content

Posts

Featured

ಮಂಡ್ಯ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷಕ್ಕೆ ಸಾಕ್ಷಿ

ಬೆಳಗ್ಗಿನಿಂದ ಮನಸ್ಸಿನಲ್ಲಿ ಏನೋ ತಳಮಳ ಭಯ ಯಾಕೆ ಅಂತನೇ ಗೊತ್ತಾಗ್ತಿರಲಿಲ್ಲ..,ಮಧ್ಯಾಹ್ನ ಸೂರ್ಯ ನೆತ್ತಿಗೆ ಬಂದಾಗ #ಶಿವಪ್ಪ ನವರೊಂದಿಗೆ #ಬೆಸಗರಹಳ್ಳಿ ಯಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ #ಶಿವಾರಗುಡ್ಡ ದ ತನಕ ಉರಿ ಬಿಸಿಲಿನಲ್ಲೆ ನಡೆಯುತ್ತಾ ತಲುಪಿದೆವು ಆ ವಾತಾವರಣಕ್ಕೆ ಕಾಲಿಡುತ್ತಿದ್ದಂತೆ ಮನಸ್ಸಿನಲ್ಲಿ ಯಾವುದೂ ಶಕ್ತಿ ಸಂಚಲನವಾದಂತಾ ಅನುಭವ ಬಹುಶಃ ಆ ಸ್ಥಳದ ಮಹಿಮೆ ಇರಬೇಕು....,ಬೆಸಗರಹಳ್ಳಿಯಿಂದ ನಡೆದು ದೇಹ ದಣಿದಿತ್ತು ಪಕ್ಕದಲ್ಲೇ ಇದ್ದ ಕಬ್ಬಿನ ಗದ್ದೆಯಲ್ಲಿ ಕೊಳವೇಬಾವಿಯ ನೀರು ಕುಡಿದು ಮುಂದೆ ಸಾಗಿದೆವು,ದಾರಿಯಲ್ಲಿ ಕುರಿಗಳಹಿಂಡು ನಮ್ಮನ್ನು ಸುತ್ತುವರೆದು ಮುಂದೆ ಹೋದವು....,ನಾವು ಮೊದಲು ಗುಡ್ಡದ ಹಿಂಬಾಗಕ್ಕೆ ಹೋದೆವು ಒಣಗಿ ನಿಂತಿದ್ದ ಮರಗಳು ನಮ್ಮನ್ನ ಸ್ವಾಗತಿಸಿದವು..., ಆ ಸುಂದರ ಪ್ರಕೃತಿಯು ಮನಸ್ಸಿಗೆ ಮುದ ನೀಡಿತು...,ಮುಂದೆ ಸಾಗುತ್ತಲೇ ನಮ್ಮ ಕಣ್ಣಿಗೆ ಬಿಳಿಯ ಬಣ್ಣದ #ಮಸೀದಿ ರೀತಿಯ ಕಟ್ಟಡ ಒಂದು ಕಣ್ಣಿಗೆ ಬಿತ್ತು ಈ ಜನಸಂಪರ್ಕ ವಿರಳವಾಗಿರುವ ಜಾಗದಲ್ಲಿ ಮಸೀದಿ ಯಾರು ಕಟ್ಟಿರ್ತಾರೆ ಎಂದು ಯೋಚಿಸುತ್ತಾ ಅಲ್ಲಿದ್ದ ತಂತಿ ಬೇಲಿಯನ್ನ ಹಾರಿ ಆ ಕಟ್ಟಡದ ಬಳಿ ಹೋದೆನು ಅಸಲಿಗೆ ಅದು ಮಸೀದಿ  ಅಲ್ಲ...,ಅದು #ಮರಣಪೂರ್ವ_ನಿರ್ಮಿತ_ಸಮಾಧಿ..., ತಮ್ಮ ಶಿಕ್ಷಕ ವೃತ್ತಿಯ ನಿವೃತ್ತ ಜೀವನವನ್ನ ಆಧ್ಯಾತ್ಮಕ್ಕೆಂದು ಮೀಸಲಿಟ್ಟು ಹಲವಾರು ದೈವೀಕಾರ್ಯಗಳನ್ನು ಮಾಡುತ್ತಾ ವರ್ಷಗಳ ಹಿಂದೆ ಶಿವೈಕ್ಯರಾದ "#ಪೂಜನೀಯ_ಶ್

Latest posts